ಕನ್ನಡದ ಹರಟೆ ಕಟ್ಟೆ

ಕನ್ನಡದ ಮಾತು ಹಾಡು ಸಾಹಿತ್ಯ ಸಂಗೀತ

ಪೋರಿಯರು in Forum

Posted by kannadnudi on July 2, 2007

043_marbella_-_shopingmall0600-re.jpg

 ಒಂದು ಕಾಲ  ಇತ್ತು ಹಬ್ಬ ಬಂದ್ರೆ ಬಟ್ಟೆ ತಿಂಗಳಿಗೆ ಒಂದು ಸಾರಿ ಮನೆಗೆ ಕಿರಾಣಿ ಬರತಿತ್ತು ಅದು ನಮ್ಮೂರಿನ ಗುರುವಾರದ ಸಂತೆಗೊ ಅಥವಾ ಹುಬ್ಬಳ್ಳಿಯ ಶನಿವಾರದ ಸಂತೆಗೊ ಹೋಗುತ್ತಿದ್ದ ನೆನಪು, ಅಲ್ಲಿ ಮಾರವಾಡಿಯ ಅಂಗಡಿಯಲ್ಲಿ ಅಜ್ಜನಿಗೆ ಚಹಾ ನಮಗೆ ನಿಂಬಿಹುಳಿ ಪೆಪ್ಪರಮೆಂಟ್ ಎಲ್ಲಾ ಸಿಗೊದು ನಾವು ಬೇರೆ ಅಂಗಡಿಗೆ ಹೋಗಬಾರ್ದು ಅಂತ  !!!, ನಾವು ಕೂಡ ಅಲ್ಲೆ ಐವತ್ತು ರೂಪಾಯಿ ಹೇಳಿದ ಬಟ್ಟೆ ಚೌಕಾಸಿ ಮಾಡಿ ಮೂವತ್ತು ರೂಪಾಯಿಗೆ ತಂದ್ವಿ ಅನ್ನೊ ಸುಳ್ಳೆ ಶ್ಯಾಣೆತನ ,      ತಿಂಗಳಿಗೆ ಒಂದು ಸಾರಿ ಸಿಗುತ್ತಿದ್ದ ಕಾಮತ್ ಹೋಟೆಲ್ ಮಸಾಲಾದೋಸೆಯ ಸೌಭಾಗ್ಯ ಎದುರಿಗೆ ಈದ್ಗಾಮೈದಾನದಲ್ಲಿ ದೊಂಬರಾಟದವರ ಥರೆವಾರಿ ಕಸರತ್ತುಗಳು ನೋಡೊ ಸಂಭ್ರಮ…… ಇನ್ನು ಟೈಮು ಸಿಕ್ಕರೆ ಅಜ್ಜ ನಮ್ಮನ್ನ ಬಸ್ಟ್ಯಾಂಡ ಪಕ್ಕದಲ್ಲಿ ಇರೊ ಸುಜಾತಾ ಟಾಕಿಜಿನಲ್ಲಿ ಯಾವದಾದ್ರು ಅಣ್ಣಾವ್ರ ಸಿನಿಮಾಕ್ಕೆ ಕರೆದೊಯ್ಯುತ್ತಿದ್ದ   ಇಂತಹ ಸಂಭ್ರಮಗಳ ಸರಮಾಲೆಗೆ ಖರ್ಚಾಗುತ್ತಿದಾದ್ದು ಐನುರು  ಆಗತಿರಲಿಲ್ಲ

ಆದ್ರೆ ಈಗ ಸಂಡೇ ಬಂದ್ರೆ ಶಾಪಿಂಗ್ ಮಾಲು    ಅಲ್ಲಿ ಎನಿಲ್ಲ ಹೇಳಿ, ಸಾಲು ಸಾಲು ಝಘ ಮಘಿಸುವ ಸಾಲಂಗಡಿಗಳು ಎಲ್ಲಕ್ಕಿಂತ ಮೊದಲು ದ್ವಾರಬಾಗಿಲಿನಲ್ಲಿ ನಾವು ಚಿಕ್ಕವರಿದ್ದಾಗ ನೋಡುತ್ತಿದ್ದ ದೊಂಬರಾಟದ ಹೊಸ ರೂಪ ಆಗ ಅವರು ಹೊಟ್ಟೆಹೊರೆಯೊಕೆ ಅಂತ ಬಿದಿಬದಿಲಿ ದೊಂಬರಾಟ ಆಡ್ತಿದ್ರು ಈಗ ದೊಡ್ಡ ದೊಡ್ಡ ಕಂಪನಿಗಳು ತಮ್ಮ ಜಾಹಿರಾತಿನ ಪ್ರಚಾರಕ್ಕೆ ಶಾಪಿಂಗ ಬರುವ (ಸಾಪ್ಟವೇರ್ )ಗಳಿಂದ ಅದನ್ನ ಮಾಡಿಸುತ್ತವೆ  ಇನ್ನು ಒಳ್ಗಡೆ ಎನಾದ್ರು ಖರೀದಿಸಿ ಚೌಕಾಸಿ ಮಾಡೊಣ ಅಂದ್ರೆ ಪಕ್ಕದಲ್ಲಿ ಇರೊರು ನಮ್ಮನ್ನ ಆದಿಮಾನವರ ತರಹ ನೋಡೊದ್ರಲ್ಲಿ ಸಂದೇಹ ಬೇಡ  ನಮ್ಮ ಮಾರವಾಡಿ ಅಂಗಡಿಲಿ ಇದೆ ಬಟ್ಟೆ ನೂರಕ್ಕೆ ಸಿಗತಿತ್ತು ಇಲ್ಲಿ ಅದಕ್ಕಿಂತ ಹತ್ತು ಪಟ್ಟ ಜಾಸ್ತಿ ಕೊಟ್ಟು ತೊಗಂಡ ಹೋಗಲೆಬೇಕು ಇಲ್ಲದಿದ್ರೆ ಪಕ್ಕದ ಮನೆಯವರಿಂದ ಶಾಪಿಂಗ್ ಹೋಗಿ ಹಾಗೆ ಬಂದ್ರು ಅನ್ನೊ ಅವಹೆಳನಕಾರಿ ಮಾತುಮತ್ತು ಜೊತೆಗೆ ಬಂದಿರೊ ಮಿನಿ ಸ್ಕರ್ಟಿಗೆ ಎಂತದೊ ಕಸಿವಿಸಿ.

ಇನ್ನು ಹಸಿವೆಯಾಗಿ ಎನಾದ್ರೂ ಹೋಟಲ್ ಹುಡುಕಿದ್ರೆ ಅದು ನಮಗೆ ಸಿಗಲ್ಲ ಅಲ್ಲೆನಿದ್ರು ಫಾಸ್ಟಫುಡ್ಡಗಳು ಮಾತ್ರ ಅಲ್ಲಿ  ನಮ್ಮ ದೋಸೆ ಕನಸು ಮಾತ್ರ ಅಲ್ಲೆನಿದ್ರು  ಪಿಜ್ಜಾ, ಬರ್ಗರ್ ಕೆಂಟುಕಿ ಚಿಕನ್ನ ಅದು ಮಾಡಿದವರಿಗೆ ಪ್ರೀತಿ.

ಇದೆಲ್ಲಾ ಮುಗಿಸಿ ಹೋರ ಬರೊಣ್ ಅಂದ್ರೆ ಮೇಲೆ ಪಿ ವಿ ಅರ್ ಸಿನಿಮಾ ಕೈಬಿಸೆ ಕರಿತಾ ಇರುತ್ತೆ ಟಿಕೆಟ ದರ ಕೆವಲ ಐನೂರು (ಇನ್ನು ಊರಲ್ಲಿ ಆ ದುಡ್ಡಿಂದ ಒಂದು ಮಿಡ್ಲಕ್ಲಾಸ ಸಂಸಾರ ತಿಂಗಳಿಗೆ ಆಗೋ  ಕಿರಾಣಿ  ಕೊಂಡಕೊಬಹುದು ಆ ಮಾತು ಬೇರೆ)ನಾನ ಟೀಕೆಟ ತೆಗಿಯಲ್ಲಾ ಅಂದ್ರೆ ನಮ್ಮ ಜೋತೆ ಬಂದಿರೊಳು (ಅದು ಸಾಪ್ಟ್ ವೆರೆ) ತೆಗಿತಾಳೆ!! ಇದಕ್ಕಿಂತ  ಬೇರೆ ಅವಮಾನ ಉಂಟಾ.

ಈಗ ಹೇಳಿ ಯಾವುದು ಚೆನ್ನ ಅಂತ ……..

ಆಗ ಐನೂರಲ್ಲಿ ಒಂದು ತಿಂಗಳ್ ಮನೆ ಸಾಮಾನು, ಸಿನಿಮಾ , ಕಾಮತ್ ಮಸಾಲೆ ದೋಸೆ  ಎಲ್ಲಾ ಮುಗಿತಿತ್ತು

ಈಗ ಒಂದು ತಿಂಗಳ ಸಂಬಳನಾ ಶಾಪಿಂಗ ಮಾಲ್ ಗಳು ಒಂದೇ ಒಂದು ಸಂಜೆಗೆ ಹೀರಿ ಬಿಡುತ್ತವೆ

                                                                                                                                                       

                                                                                               ಮಹೇಶ

Posted in Uncategorized | Leave a Comment »

ಮಳೆಗಾಲದ ಒಂದು ಸಂಜೆಯಲಿ…………

Posted by kannadnudi on June 30, 2007

image0151.jpgimage015.jpgimage015.jpg

ಸುರಿಯುವ ಸೋನೆಯಲಿ ನೆನೆದೆ ನಿನ್ನಂದ

ಹೆಳಲಿ ನಾ ಹೇಗೆ ನನ್ನ ಮನದಾಳದ ಮಾತಿಂದ

ಆದರು ಕೇಳು ಒಲವೇ ನಿನ್ನ ನೆನಪಿನಿಂದ ಆದ ಬೆರಗೊಂದ

 ಆ ಸೋನೆಯಲಿ ಜೊತೆಯಾದೆ ನೀ,,

ಆ ಸಂಜೆ ಸುರಿದ ಮಳೆಗೆ ಮುತ್ತಾದೆ ನೀ

ಆರ್ಭಟಿಸಿದ ಸಿಡಿಲಿಗೆ ಹರಿಣಿಯಾದೆ ನೀ

ಕಣ್ಣಕೊರೈಸುವ ಮಿಂಚಿಗೆ ನನ್ನೆದೆ ಗೂಡಿನ ಗುಬ್ಬಚ್ಚಿಯಾದೆ ನೀ

ಅಂದು ನೀ ನುಡಿದಿದ್ದೆ ನೀ ನನ್ನವಳೆಂದು

ನಾ ನಿನ್ನವನೆಂದು

ಲೋಕದ ಹಂಗಿನ್ಯಾಕೆಂದು

ಅಂದು ಸುರಿದ ಸೋನೆಗೆ ಶಪಿಸುವೆ ನಾನಿಂದು

ಹೇಳು ಇಂದು ಬಂದ ಸೋನೆಗೆ ಹೇಗೆ ಹೇಳಲಿ ನಿನೆಲ್ಲೆಂದು

ನಾನಿನ್ನು ಹುಡುಕುತಲಿರುವೆ

ನೀ ಮಳೆಯಲಿ ನಡೆದು ಬಂದ ಹೆಜ್ಜೆಯ ಗುರುತ

ಕೈ ಬಳೆಯ ನಾದವ

ನೀ ಮುಡಿದ ಮಲ್ಲಿಗೆಯ ಘಮ ಘಮವ

ಮತ್ತೊಮ್ಮೆ ಬರಲಾರೆಯಾ ಒಲವೇ ನನ್ನ

ಮನದಂಗಳಕೆ ಸೋನೆ ನಂತರದ ತಂಗಾಳಿಯ ಹಾಗೆ

ಸುರಿಯುವ ಸೋನೆಯಲಿ ನೆನೆದೆ ನಿನ್ನಂದ

ಹೆಳಲಿ ನಾ ಹೇಗೆ ನನ್ನ ಮನದಾಳದ ಮಾತಿಂದ

ಆದರು ಕೇಳು ಒಲವೇ ನಿನ್ನ ನೆನಪಿನಿಂದ ಆದ ಬೆರಗೊಂದ

Posted in Uncategorized | Leave a Comment »

ನಮ್ಮ ಕಾನ್ವೆಂಟು!!!!!!

Posted by kannadnudi on June 30, 2007

ಇವತ್ತು ಮಧ್ಯ್ಹಾನ ಮನೆಗೆ ಹೋಗುವಾಗ ಒಂದು ಘಂಟೆಯಾಗಿತ್ತು ಆವಾಗ ಒಂದು ವಿಚಿತ್ರ ನೋಡಿದೆ ಶಾಲೆಗೆ ಆಗ ಲಂಚ್ ಬ್ರೆಕ್ ಅನ್ಸುತ್ತೆ , ಶಾಲೆಯ ಎದುರಿನ ಫುಟಪಾತ ಮೇಲೆ, ಗಟರ ದಂಡೆಯ ಪಕ್ಕ,    ಅಮ್ಮಂದಿರು  ಎಲ್ಲೆಂದರಲ್ಲಿ ತಮ್ಮ ಕಂದಮ್ಮಗಳಿಗೆ ಕೈ ತುತ್ತು ತಿನ್ನಿಸೊದನ್ನ ಕಂಡೆ .

ಇವತ್ತು ಕಾನ್ವೆಂಟ  ನಮ್ಮನ್ನ ಎಲ್ಲಿಗೆ ತಂದು ನಿಲ್ಲಿಸಿದೆ ನೋಡಿ ನಮ್ಮ ತಾಯಂದಿರಿಗೂ ಅದೇ ಬೇಕು ಮಗು ಗಟರ ದಂಡೆಯ ಮೇಲೆ ಕುಳಿತು ಊಟ ಮಾಡಿದರು ಚಿಂತೆ ಇಲ್ಲ ನನ್ನ್ ಮಗ ನನ್ನ ಮಮ್ಮಿ ಅನ್ಲಿ  ಅಂತ ಆಸೆ ಪಡ್ತಾರೆ, ನಾವು ಶಾಲೆಗೆ ಹೋಗುವಾಗ ಇದೆಲ್ಲ ಇತ್ತಾ ಆವಾಗ ಎಲ್ಲಿದ್ರು ಇವರು ಕಾನ್ವೆಂಟ್ ಜನ, ಆಗ ಒದಿದ ಯಾರಿಗೂ ಆಂಗ್ಲ್  ಬರ್ತಿರಲಿಲ್ವಾ ಒಳ್ಳೆ ಶಾಲೆಗಳು ಇರಲಿಲ್ವಾ ಆವಾಗಿನ ನಾವೆ ಕನ್ನಡ ಶಾಲೆಯ ಜನಗಳೆ ಇವತ್ತು  ಕಾನ್ವೆಂಟ್ ತಂದಿರೊ ಜನಕ್ಕಿಂತ ತುಂಬ ಮುಂದೆ ಇದ್ದೆವೆ ಅಲ್ವಾ ನಾನು ಹೆಳ್ತಾ ಇರೋದು ಊಟದ ಮಾತು ಅಲ್ವಾ ಆವಾಗಿನ ಮಾತು ಬಿಡಿ ಈಗಲೂ ಕನ್ನಡ ಶಾಲೆ ಗಳಲ್ಲಿ ಮಕ್ಕಳ ಊಟದ ವ್ಯವಸ್ತೆ ಎಂದಿಗಿಂತ  ಸುಧಾರಿಸಿದೆ  .

ನಾವುಗಳೆಲ್ಲಾ ಎನ್ ಮಾಡ್ತಿದಿವಿ ನಿತ್ಯ ಬದುಕಿನ ಜಂಜಾಟದಲ್ಲಿ ಇವೆಲ್ಲ  ಸಣ್ಣ ಸಣ್ಣ ಮಾತುಗಳೆ ಇರಬಹುದು ,ಆದರೆ ಯೊಚನೆ ಮಾಡಿದ್ರೆ ತಿಳಿಯುತ್ತೆ ಒಬ್ಬ ಎಂಟನೆ ಕ್ಲಾಸಿನ ವಿದ್ಯಾರ್ಥಿಗೆ ಅವರ ಅಮ್ಮಾನೆ ಬಂದು ಕೈತುತ್ತು ತಿನ್ನಿಸಬೇಕು ಅದರ ಕೈಯಲ್ಲಿ ಆ ಕೆಲಸ ಸಾಧ್ಯವೇ ಇಲ್ಲ .

 ಮುಂದೆ ಅದು ತನ್ನ  ಬದುಕನ್ನ ಹ್ಯಾಗೆ ರೂಪಿಸಿಕೊಳ್ಳಬಹುದು ಅಂತ ಯೋಚನೆ  ಮಾಡಬೇಕಾದ ಮಾತೆ ಅಲ್ವಾ

ಯಾವುದೆ ಡೊನೆಶನ್ ಇಲ್ಲದೆನೆ ಬದುಕು ಕಟ್ಟಿಕೊಟ್ಟ ಕನ್ನಡ ಶಾಲೆಗಳು ಎಲ್ಲಿ ,  ಡೊನೆಶನ್ ತೊಗೊಂಡು ಮಕ್ಕಳನ್ನ ರಸ್ತೆ ಬದಿಯಲ್ಲಿ ಕೂಡ್ರಿಸೊ ಕನ್ವೆಂಟ್ ಎಲ್ಲಿ ಅಲ್ವ

ನಮ್ಮ ಜನಕ್ಕೆ ಬುದ್ದಿ ಅನ್ನೊದು ಯಾವಾಗ ಬರುತ್ತೊ ಎನೋ

ಮಹೇಶ್ ಎಸ್ ಎಲ್

Posted in Uncategorized | Leave a Comment »

ವಾಸುದೇವನ ಒಲವು ಮುನಿದಾಗ

Posted by kannadnudi on June 14, 2007

ವಾಸುದೇವನ ಒಲವು ಮುನಿದು ನಿಂತಾಗ

Posted in Uncategorized | Leave a Comment »

ಹಂಗಾರ್ ನೀ ಹೋಗ್

Posted by kannadnudi on June 8, 2007

ಈ ಮಾತನ್ನ ಅವನು ಯಾವುದೆ ಉದ್ವೇಗವಿಲ್ಲದೆ ಹುಟ್ಟಿದ ಆ ಇಪ್ಪತೈದು ವಸಂತಗಳಲ್ಲಿ ಆ ರೀತಿ ಸಮಾಧಾನವಾಗಿ ಹೇಳಿದ್ದ  ಹಂಗಾರ್ ನೀ ಹೋಗ್

ಅವನಿಗೆ ತನ್ನ ಈಗಿನ ಪರಿಸ್ಥಿತಿಗಿಂತ ಅದನ್ನ ತಂದೊಡ್ಡಿದ  ದರಿದ್ರ ಜಾತಿ ಪ್ರಪಂಚದೆಡೆಗೆ ಒಂದು ಸಿಟ್ಟು ಅನ್ನೊದಕ್ಕಿಂತ ದಿವ್ಯ ನಿರ್ಲಕ್ಶತನ ಬಂದು ಬಿಟ್ಟಿತ್ತು

ಅವನ ಆಗಿನ ಸ್ಥಿತಿಗೆ ಒಂದು ರೀತಿ ಅವನೆ ಕಾರಣ ಅವನೂ ಸಹ ಜಗತ್ತಿನ ಸಮಸ್ತ ಜೀವಿಗಳಂತೆ ಪ್ರೀತಿಯ ಬೆಂಬತ್ತಿದ್ದ ಅವಳು ಸಹ ಅದನ್ನೆ ಮಾಡಿದ್ಲು ಅದು ಐದು ಸಂವತ್ಸರ ಗಳಿಂದ ನಿರಂತರ ಸಾಗಿದ ಒಲವಿನ ಪಯಣ,,,,

ಅದರಲ್ಲಿ ಸ್ವಲ್ಪ ಸಿಟ್ಟು, ಚೂರು ಬಿಗುಮಾನ ಮುಂದೆ ಬರುವ ಎಲ್ಲಾ ಜನ್ಮಕ್ಕೂ ಕೊಟ್ಟರೂ ಮುಗಿಯಲಾರದ ಒಲವು, ಎಲ್ಲಾ ಇತ್ತು ಆದರೂ ಜಾತಿ ಸುಳಿಗೆ ಸಿಕ್ಕ ಪ್ರೀತಿಯ ದೋಣಿ ಐದೇ  ಸಂವತ್ಸರಕ್ಕೆ ಮುಳುಗಿ ಹೋಗಿತ್ತು.

 

ಕುವೆಂಪು ಹೇಳಿದ್ರು __

ಜಾತಿ ಸುಡೊ ಮಂತ್ರ ಕಿಡಿ

ಪ್ರೀತಿ ಅಂತ

ಆದ್ರೆ ನಮ್ಮ ಜಾತಿಯ ಭೂತಗಳು ಅದನ್ನ  ಮಾಡಿದ್ದು

ಪ್ರೀತಿ ಸುಡೊ  ಮಂತ್ರ ಕಿಡಿ

ಜಾತಿ ಅಂತ

ಕಟ್ಟಿಕೊಂಡ  ಕನಸುಗಳು , ಒಬ್ಬ್ಬರಿಗೊಬ್ಬರು ಕೊಟ್ಟುಕೊಂಡ ಆಶ್ವಾಸನೆಗಳು, ಬರೆದುಕೊಂಡ ಪ್ರೀತಿಯ ಪತ್ರಗಳು , ಒಲವಿನ ಹಾಡು ತಿರುಗಾಡಿದ ಬೀದಿಗಳು , ಒಟ್ಟಿಗೆ ಕುಳಿತು ಮೊದಲು ಹುಟ್ಟುವ ಹೆಣ್ಣು ಮಗುವಿಗೆ ಇಡಬೇಕಾದ ಹೆಸರು.ಇದೆಲ್ಲವನ್ನು ಒಂದೆ ಉಸಿರಲ್ಲಿ ಕೊಚ್ಚಿ ಹಾಕಿದ್ದು ಜಾತಿ ಎಂಬ ಪಾಪಾತ್ಮ!!!!!!!

 

ಹುಡುಗಾ ಪ್ರೀತ್ಸ್ ತಿಯಾ ಅಂತ ಕೆಳ್ತು

ಹುಡುಗಿ ಹೇಳ್ತು ಹೂಂ ಜಾತಿನಾ!!

ಅದಕ್ಕೆ ಹುಡುಗಾ ಹೇಳಿದ್ದು ಹಂಗಾರ್ ನೀ ಹೋಗ್  

ಅಂತ

ಗೆಳೆಯರೆ ಕೊನೆಯ ಒಂದು ಮಾತು

ಯಾವ ಕಾಲದಲ್ಲಿ ಇದಾರೆ ಇನ್ನು ಇವರು ಜಾತಿ ಬಗ್ಗೆ ಮಾತಾಡ್ತಾರೆ ಇವರ ಪೂಜೆಯ ವಿಧಾನ ವನ್ನ ಇವರದೆ ಮನೆಯಿಂದ ಹೋರಗೆ  ಹೋಗುವ ಇವರ ಕಂದ ಬಾರಲ್ಲಿ ಅದರ ಅರ್ಥ ಹೆಳ್ತಾ ಕೂತಿರುತ್ತೆ

ಜಾತಿ ಜಿಂದಾಬಾದ್

Posted in Uncategorized | 1 Comment »

 
Follow

Get every new post delivered to your Inbox.